Shree Subramanya Sthanika Samaja Seva Sangha (R.) Sullia

                   ಶ್ರೀ ಸುಬ್ರಮಣ್ಯ ಸ್ಥಾನಿಕ ಸಮಾಜ ಸೇವಾ ಸಂಘ (ರಿ.) ಸುಳ್ಯ

ಸೌಹಾರ್ದ ಸಂಭ್ರಮ 2016:
ದಿನಾಂಕ 6/11/16 ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಜರಗಿದ ಸಮಾಜ ಬಾಂಧವರ "ಸೌಹಾರ್ದ ಸಂಭ್ರಮ" ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಜಗನ್ನಿವಾಸ ರಾವ್ ಇವರು ಕಾರ್ಯಕ್ರಮ  ಉದ್ಘಾಟಿಸಿದರು. ಸಂಘದ  ಅಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್ ಕೆರೆಕರೆ ಪ್ರಸ್ತಾವನೆ ಮಾತುಗಳನ್ನಾಡಿದರು. ಕಾರ್ಯದರ್ಶಿ ಕೃಷ್ಣ ರಾವ್ ಸ್ವಾಗತಿಸಿದರು.ಸುಮಾರು 50 ಮಂದಿ ಸಮಾಜ ಬಾಂಧವರು ರಂಗೋಲಿ, ಕಂಟಪಾಠ ಸ್ಪರ್ದೆ ಮೊದಲಾದ ಸ್ಪರ್ದೆಗಳಲ್ಲಿ ಭಾಗವಹಿಸಿದರು. ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶ್ರೀ ಭಾಸ್ಕರ ರಾವ್ ಬಯಂಬು ಧನ್ಯವಾದ ಸಮರ್ಪಿಸಿದರು.

ಸುಳ್ಯ, 24.01.2016: ಸಂಘದ ಸದಸ್ಯರಿಂದ ಮಠಂತಬೆಟ್ಟುವಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

                         ದಿನಾಂಕ 24.01.2016 ಭಾನುವಾರ ಸಂಘದ ಸದಸ್ಯರಿಂದ ಮಠಂತಬೆಟ್ಟುವಿನಲ್ಲಿ ಬ್ರಹ್ಮಕಲಶ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಯಿತು. ಈ ಕಾರ್ಯಕ್ರಮವನ್ನು ಡಾ  ವೀಣಾ ಸಂಯೋಜಿಸಿದ್ದರು. ಕೃಷ್ಣ ರಾವ್ ನಾವೂರು, ಶ್ರೀಧರ ರಾವ್ ಮೊದಲಾದವರು ವ್ಯವಸ್ಥೆಯಲ್ಲಿ ಸಹಕರಿಸಿದರು.

20.01.2016, ಸುಳ್ಯ: ಹೊರೆ ಕಾಣಿಕೆ ಸಮರ್ಪಣೆ:

                     ದಿನಾಂಕ 20.01.2016 ಬುಧವಾರ ಸಂಘದ ಸುಳ್ಯದ ಸದಸ್ಯರ ವತಿಯಿಂದ ಮಠಂತಬೆಟ್ಟು ಬ್ರಹ್ಮಕಲಶೋತ್ವವಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಪೂರ್ವಾಹ್ನ ಜ್ಯೋತಿ ಆಸ್ಪತ್ರೆಯಲ್ಲಿ ಹೊರೆಕಾಣಿಕೆ ಸಂಗ್ರಹ ಮಾಡಲಾಯಿತು. ನಂತರ ಕೃಷ್ಣ ರಾವ್ ನಾವೂರು ಹಾಗೂ ಹಿರಿಯರಾದ ವಿಠಲ ರಾವ್ ಮೊದಲಾದವರು ವಾಹನದ ಮೂಲಕ ಹೊರೆಕಾಣಿಕೆಯನ್ನು ಮಠಂತಬೆಟ್ಟು ದೇವಸ್ಥಾನಕ್ಕೆ ತಲುಪಿಸಿದರು.

ಸಂಘದ ವಾರ್ಷಿಕ ಮಹಾಸಭೆ ಮತ್ತು ಶಂಕರ ಜಯಂತಿ ಆಚರಣೆ 2015:
ದಿನಾಂಕ 17-05-2015ನೇ ಭಾನುವಾರದಂದು ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾ ಭವನದಲ್ಲಿ 2015ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ಮತ್ತು ಶಂಕರ ಜಯಂತಿ ಕಾರ್ಯಕ್ರಮ ಜರಗಿತು.
ಸುಮಾರು 100ರಷ್ಟು ಸಮಾಜ ಬಾಂಧವರು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ  ಶ್ರೀ ಸದಾನಂದ ಶಾಸ್ತ್ರಿಯವರ ನೇತೃತ್ವದಲ್ಲಿ ಶಂಕರಾಚಾರ್ಯ ಕಲ್ಪೋಕ್ತ ಪೂಜೆ ನಡೆಯಿತು ನಂತರ ಸಭಾ ಕಾರ್ಯಕ್ರಮ ಜರಗಿತು. ಶ್ರೀ ಸತ್ಯಶಂಕರ ಬೊಳ್ಳಾವ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ಜೋಗಿಮೂಲೆ ಶಿವಣ್ಣಯ್ಯ,  ಅಧ್ಯಕ್ಷರು, ಶಿವಬ್ರಾಹ್ಮಣ ಸಭಾ ಕಾಸರಗೋಡು, ಅಡೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಶಶಹಿಕಲಾ ಹರಪ್ರಸಾದ್ ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣರಾವ್ ನಾವೂರು ವಂದಿಸಿದರು. ಸಾಯಂಕಾಲ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕ್ರೀಡೋತ್ಸವ 2015:
ದಿನಾಂಕ 22-02-2015 ಭಾನುವಾರ ಸಂಘದ ವತಿಯಿಂದ ಸಮಾಜ ಬಾಂಧವರಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ವಿವಿಧ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿತ್ತು. ಸುಮಾರು 40ರಷ್ಟು ಸಮಾಜ ಬಾಂಧವರು ಹುರುಪಿನಿಂದ ಮುಂಜಾನೆ 9.30ರಿಂದ ಅಪರಾಹ್ನ 1.00 ಗಂಟೆಯವರೆಗೆ ಭಾಗವಹಿಸಿದರು. ಕ್ರಿಕೆಟ್, ಲಗೋರಿ, ಓಟ, ಗುಂಡೆಸೆತ ಮೊದಲಾದ ಸ್ಪರ್ದೆಗಳಲ್ಲಿ ಎಲ್ಲರೂ ಸ್ಪೂರ್ತಿಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪೂರ್ವಾಹ್ನ 9 ಗಂಟೆಗೆ ಸಂಗದ ವತಿಯಿಂದ  ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಕೂಟದ ಮಧ್ಯೆ 11 ಗಂಟೆಗೆ ದ್ವಾರಕಾ ಸುಜಾತಕ್ಕ ಸರ್ವರಿಗೂ ಕಲ್ಲಂಗಡಿ ಹಣ್ಣಿನ ರುಚಿ ಸವಿಸಿದರು. ಅಪರಾಹ್ನ ಚೆನ್ನಕೇಶವ ದೇವಸ್ಥಾನದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.